ಮಂಗಳವಾರ, ನವೆಂಬರ್ 20, 2012

ಆಶಯ


ಉಜ್ವಲ ಭಾರತದ ಭವಿಷತ್ತು ಬೆಳಗಲಿ
ದೇಶಬಾಂಧವರ ಬಾಳು ಫಲವೀಯಲಿ
ಹಸಿವು ನೀಗಿ ದಾಹ ತೀರಲಿ
ರೊಟ್ಟಿ ಬಟ್ಟೆ ಮನೆ ಹೊಂದಲಿ

ನೆಲ-ಜಲ ಬೆಟ್ಟ-ಕಾಡು ರಕ್ಷಣೆಕಾಣಲಿ
ಜೈವಿಕ ಕ್ರಾಂತಿಯಲಿ ಹೊಲಪೈರು ನಳನಳಿಸಲಿ
ಕೈಗಾರಿಕೆ ನೆಲೆಕಂಡು ಉದ್ಯೋಗದೊರಕಲಿ
ಅಭಿವೃದ್ದಿಯಪಥ ಪರಿಸರಪರವಾಗಿರಲಿ

ಪ್ರತಿ ಮಗು ಸಮಾಜಮುಖಿಯಾಗಲಿ
ಸಂಸ್ಕೃತಿ ಸಂಸ್ಕಾರಮೇಳೈಸಿ ಮೌಢ್ಯತೆ ಕರಗಲಿ
ಆಚಾರವಿಚಾರದಲಿ ಸಿರಿವಂತಿಕೆಯಿರಲಿ
ವಿದ್ಯೆವಿದ್ವತ್ತಿರಲಿ, ಜ್ಞಾನಸಾಗರವಾಗಲಿ

ಸಮೃದ್ದಿ ಸಾಮರಸ್ಯ ಜೀವಾಳವಾಗಲಿ
ಸಂಕುಚಿತತೆ ವೈಶಾಲ್ಯದಲಿ ಕಳಚಲಿ
ರಾಷ್ಟ್ರವೈಭವದಿ ಅಭಿಮಾನ ಮೊಳಗಲಿ
ನ್ಯಾಯ ನೀತಿ ಸದ್ದರ್ಮ ಬುನಾದಿಯಗಲಿ

Whispers of Stolen Identities

In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...