ಅವನು> ಅವುಚಿ ಅವುಚಿ ಎದೆಗವುಚಿ
ತಬ್ಬಲು ಮೇಲೆ ಬಿದ್ದು ಕವಿಚಿ
ಅಯ್ಯೋ ಏನೋ ವೇದನೆ ಸಂ..ವೇದನೆ
ನಿನ್ನ ಕೋಮಲ ಮೈ ತಾಕಲು ಲಲನೆ
ಅವಳು> ಚೆಲುವ, ಹೃದಯ ಕರೆಯಿತು
ಬಾ ಎಂದು ಪ್ರೀತಿ ಮಾಡಲು
ದೂರವಿದ್ದರೂ ಪ್ರೀತಿಕರೆ ಕೇಳಿ
ಓಡೋಡಿ ಬಂದೆ ಸೇರಲು
ಅವನು> ನಿನ್ನಿರುವಿಕೆ ಗಮನಿಸಲು
ಮೈಯೆಲ್ಲಾ ಕಣ್ಣಾಗಿಸುವೆ
ನಿನ್ನಂತರಂಗ ದನಿ ಕೇಳಲು
ಮನಸ್ಸು ಕಿವಿಯಾಗಿಸುವೆ
ಅವಳು> ಹೃದಯ ಮಾತಾಡಲು
ಎಲ್ಲಿಯ ದೂರ? ಎಲ್ಲಿಯ ವಿರಹ?
ನಾವೆಂದಿಗೂ ತೀರ ತೀರ ಹತ್ತಿರ
ಪ್ರೀತಿ ಮನಕೆ ಎಲ್ಲಿಯ ಅಂತರ?
ಅವನು> ಸಂತೆ ಬೀದಿಯ ಗದ್ದಲದಲೂ
ಪ್ರೇಮ ಸಲ್ಲಾಪ ಕೇಳಬಲ್ಲೆ!
ಊರ ತೇರ ಜಾತ್ರೆಯಲೂ
ದೃಷ್ಟಿಯಂಚಲೆ ಹುಡುಕಬಲ್ಲೆ!
ಅವಳು> ಇನಿಯನನೆ ಮನೆಯ ಮಾಡಿ
ಮನೆಯಲ್ಲಿ ವಾಸ ಮಾಡಿದೆ
ನನ್ನನ್ನೆ ಮನೆಮಾಡಿ ಇನಿಯನ ಕರೆದೆ
ನಾನೆಲ್ಲಿ? ಮನೆಯೆಲ್ಲಿ? ಇನಿಯನೆಲ್ಲಿ?
ಇಲ್ಲಿ ಎಲ್ಲಾ ಒಂದೇನೆ..
ತಬ್ಬಲು ಮೇಲೆ ಬಿದ್ದು ಕವಿಚಿ
ಅಯ್ಯೋ ಏನೋ ವೇದನೆ ಸಂ..ವೇದನೆ
ನಿನ್ನ ಕೋಮಲ ಮೈ ತಾಕಲು ಲಲನೆ
ಅವಳು> ಚೆಲುವ, ಹೃದಯ ಕರೆಯಿತು
ಬಾ ಎಂದು ಪ್ರೀತಿ ಮಾಡಲು
ದೂರವಿದ್ದರೂ ಪ್ರೀತಿಕರೆ ಕೇಳಿ
ಓಡೋಡಿ ಬಂದೆ ಸೇರಲು
ಅವನು> ನಿನ್ನಿರುವಿಕೆ ಗಮನಿಸಲು
ಮೈಯೆಲ್ಲಾ ಕಣ್ಣಾಗಿಸುವೆ
ನಿನ್ನಂತರಂಗ ದನಿ ಕೇಳಲು
ಮನಸ್ಸು ಕಿವಿಯಾಗಿಸುವೆ
ಅವಳು> ಹೃದಯ ಮಾತಾಡಲು
ಎಲ್ಲಿಯ ದೂರ? ಎಲ್ಲಿಯ ವಿರಹ?
ನಾವೆಂದಿಗೂ ತೀರ ತೀರ ಹತ್ತಿರ
ಪ್ರೀತಿ ಮನಕೆ ಎಲ್ಲಿಯ ಅಂತರ?
ಅವನು> ಸಂತೆ ಬೀದಿಯ ಗದ್ದಲದಲೂ
ಪ್ರೇಮ ಸಲ್ಲಾಪ ಕೇಳಬಲ್ಲೆ!
ಊರ ತೇರ ಜಾತ್ರೆಯಲೂ
ದೃಷ್ಟಿಯಂಚಲೆ ಹುಡುಕಬಲ್ಲೆ!
ಅವಳು> ಇನಿಯನನೆ ಮನೆಯ ಮಾಡಿ
ಮನೆಯಲ್ಲಿ ವಾಸ ಮಾಡಿದೆ
ನನ್ನನ್ನೆ ಮನೆಮಾಡಿ ಇನಿಯನ ಕರೆದೆ
ನಾನೆಲ್ಲಿ? ಮನೆಯೆಲ್ಲಿ? ಇನಿಯನೆಲ್ಲಿ?
ಇಲ್ಲಿ ಎಲ್ಲಾ ಒಂದೇನೆ..