ರಹಸ್ಯ ಸೌಂದರ್ಯದ ಗಣಿಯವಳು
ಸೊಬಗ ಮೀರಿದ ಸೊಬಗವಳು
ಚಿನ್ನ ಬಣ್ಣದ ಮೆರುಗಿಲ್ಲದ
ನಿರಾಭರಣ ಕಾಂತಿಯವಳು
ರವಿ ನಸುಕ ಮುಸುಕಲಿಳಿದ
ಶಶಿ ಅವಿತ ಮೇಘದಲಿ
ಯಾರು ಸಲ್ಲರು ಕ್ಷಣ ಕಳೆಯಲು?
ಮಾಯಾಂಗನೆಯ ಜೊತೆಯಲಿ
ತ್ರಿಲೋಕ ಸಾರಿದವಳ
ಬೆಡಗಿನ ವರ್ತಮಾನಕೆ
ಸ್ವರ್ಗಗಣ ಒಗ್ಗೂಡಿ
ಅವತರಿಸಿತು ಧರೆಗೆ
ಅಪ್ಸರೆಯರು ಹಿಂಜರಿದರು
ಅಮೋಘ ಅಂದದ ಮುಂದೆ
ಈರ್ಷೆಯಲಿರಲು ಸುರಸುಂದರಿಯರು
ಬ್ರಹ್ಮ ಮೈಮರೆತ ಸ್ವಂತ ಕೈಚಳಕಕೆ
ಕಂಡಿಲ್ಲ ಈಪರಿಯ ಲಾವಣ್ಯವನೆಂದು
ಉಲಿಯುತಿರೆ ಮರ್ಮವನರಿಯದೆ
ನಾಕಜನ ಮೂಕವಾಯ್ತು
ಆ ವಿಸ್ಮಯ ಚುಂಬಕ ಚೆಲುವಿಗೆ
ಸೊಬಗ ಮೀರಿದ ಸೊಬಗವಳು
ಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳು
ರವಿ ನಸುಕ ಮುಸುಕಲಿಳಿದ
ಶಶಿ ಅವಿತ ಮೇಘದಲಿ
ಯಾರು ಸಲ್ಲರು ಕ್ಷಣ ಕಳೆಯಲು?
ಮಾಯಾಂಗನೆಯ ಜೊತೆಯಲಿ
ತ್ರಿಲೋಕ ಸಾರಿದವಳ
ಬೆಡಗಿನ ವರ್ತಮಾನಕೆ
ಸ್ವರ್ಗಗಣ ಒಗ್ಗೂಡಿ
ಅವತರಿಸಿತು ಧರೆಗೆಅಪ್ಸರೆಯರು ಹಿಂಜರಿದರು
ಅಮೋಘ ಅಂದದ ಮುಂದೆ
ಈರ್ಷೆಯಲಿರಲು ಸುರಸುಂದರಿಯರು
ಬ್ರಹ್ಮ ಮೈಮರೆತ ಸ್ವಂತ ಕೈಚಳಕಕೆ
ಕಂಡಿಲ್ಲ ಈಪರಿಯ ಲಾವಣ್ಯವನೆಂದು
ಉಲಿಯುತಿರೆ ಮರ್ಮವನರಿಯದೆ
ನಾಕಜನ ಮೂಕವಾಯ್ತು
ಆ ವಿಸ್ಮಯ ಚುಂಬಕ ಚೆಲುವಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ