ಬುಧವಾರ, ಜೂನ್ 5, 2013

ಶಂಕೆ ಬೇಡ



ನನ್ನೊಲವು ನಿನ್ನೊಳಿರಲು
ನಿನ್ನ ಧ್ಯಾನವೇ ಕಾಯಕ
ತಿರುಕನಂತೆ ತಿರುಗದು
ಮನ ಸ್ಥಿರ ನಿತ್ಯನಿರುತ

ಶಂಕೆ ಏಕೆ ನನ್ನಲಿ?
ಪ್ರೇಮ ರೇಖೆ ಎಳೆದಿದೆ
ಅಂಕೆ ಮೀರಿ ಹೋಗಲಾರೆ
ಸೆಳೆಯದನ್ಯ ಆಕರ್ಷಣೆ

ಪ್ರೀತಿ ಬೆಳೆದು ಬಲಿತು
ಸಾಂಗತ್ಯ ಫಲಿಸಿದೆ
ತನುಮನ ಬೆಳಗಿದೆ
ನಿನ್ನ ಬೆಳಕಿನಿಂದಲೆ

ಕೊರತೆ ಏನೂ ಇರದು
ಪೂರ್ಣ ಪೂರ್ಣ ಬದುಕು
ನಂಬಿಕೆಯ ನೆಚ್ಚಿರಲು
ಒಲವ ಬಂಧ ಮುರಿಯದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Whispers of Stolen Identities

https://www.youtube.com/watch?v=oFBuHxNXOOQ