ಬುಧವಾರ, ಜೂನ್ 5, 2013
ಮಂಗಳವಾರ, ನವೆಂಬರ್ 20, 2012
ಆಶಯ
ಉಜ್ವಲ ಭಾರತದ ಭವಿಷತ್ತು ಬೆಳಗಲಿ
ದೇಶಬಾಂಧವರ ಬಾಳು ಫಲವೀಯಲಿ
ಹಸಿವು ನೀಗಿ ದಾಹ ತೀರಲಿ
ರೊಟ್ಟಿ ಬಟ್ಟೆ ಮನೆ ಹೊಂದಲಿ
ನೆಲ-ಜಲ ಬೆಟ್ಟ-ಕಾಡು ರಕ್ಷಣೆಕಾಣಲಿ
ಜೈವಿಕ ಕ್ರಾಂತಿಯಲಿ ಹೊಲಪೈರು ನಳನಳಿಸಲಿ
ಕೈಗಾರಿಕೆ ನೆಲೆಕಂಡು ಉದ್ಯೋಗದೊರಕಲಿ
ಅಭಿವೃದ್ದಿಯಪಥ ಪರಿಸರಪರವಾಗಿರಲಿ
ಪ್ರತಿ ಮಗು ಸಮಾಜಮುಖಿಯಾಗಲಿ
ಸಂಸ್ಕೃತಿ ಸಂಸ್ಕಾರಮೇಳೈಸಿ ಮೌಢ್ಯತೆ ಕರಗಲಿ
ಆಚಾರವಿಚಾರದಲಿ ಸಿರಿವಂತಿಕೆಯಿರಲಿ
ವಿದ್ಯೆವಿದ್ವತ್ತಿರಲಿ, ಜ್ಞಾನಸಾಗರವಾಗಲಿ
ಶನಿವಾರ, ಮೇ 5, 2012
ಸಹಬಾಳ್ವೆ
ದೇಶ ಕಟ್ಟುವ ಭಾವೈಕ್ಯದ ಭಾಂದವ್ಯ
ಕಲಹವರಿಯೆವು ಪ್ರೇಮ ಸವಿವೆವು
ಒಡಹುಟ್ಟಿದರೆಲ್ಲರು ಸಹಬಾಳ್ವೆಯಲಿರುವೆವು
ನಮ್ಮ ಮಕ್ಕಳಲಿ ನಮಗಭಿಮಾನವು
ನೀತಿ ನಡೆಯಲವರು ಸದಾಚಾರಿಗಳು
ಹೆತ್ತವರಲಿ ನಮಗಿರಲಾದರವು
ಸೇವೆಮಾಡಿ ಪುಣ್ಯಪಡೆವೆವು
ಅವರ ಹಾರೈಕೆ ಜೊತೆಯಲಿರಲು
ಅಂಜದೆ ಐಕ್ಯ ಪಥದಲಿ ಮುನ್ನಡೆವೆವು
ಕೂಡಿ ಬರುವೆವು ದಿವ್ಯ ಸನ್ನಿಧಿಗೆ
ಹಾಡಿಹೊಗಳಲು ಏಕ-ದೇವ-ಬಹುನಾಮಗಳನು
ಮುರಿಯದ ಭಾಂದವ್ಯ ಇರಲೆಂದಿಗೂ ಹೀಗೆ
ಪರಾಂಬರಿಸಿ ವಿಭು ದಾರಿತೋರೆಮ್ಮನು
ಕಲಹವರಿಯೆವು ಪ್ರೇಮ ಸವಿವೆವು
ಒಡಹುಟ್ಟಿದರೆಲ್ಲರು ಸಹಬಾಳ್ವೆಯಲಿರುವೆವು
ನಮ್ಮ ಮಕ್ಕಳಲಿ ನಮಗಭಿಮಾನವು
ನೀತಿ ನಡೆಯಲವರು ಸದಾಚಾರಿಗಳು
ಹೆತ್ತವರಲಿ ನಮಗಿರಲಾದರವು
ಸೇವೆಮಾಡಿ ಪುಣ್ಯಪಡೆವೆವು
ಅವರ ಹಾರೈಕೆ ಜೊತೆಯಲಿರಲು
ಅಂಜದೆ ಐಕ್ಯ ಪಥದಲಿ ಮುನ್ನಡೆವೆವು
ಕೂಡಿ ಬರುವೆವು ದಿವ್ಯ ಸನ್ನಿಧಿಗೆ
ಹಾಡಿಹೊಗಳಲು ಏಕ-ದೇವ-ಬಹುನಾಮಗಳನು
ಮುರಿಯದ ಭಾಂದವ್ಯ ಇರಲೆಂದಿಗೂ ಹೀಗೆ
ಪರಾಂಬರಿಸಿ ವಿಭು ದಾರಿತೋರೆಮ್ಮನು
ಶನಿವಾರ, ಏಪ್ರಿಲ್ 21, 2012
ಹೊಂಗೆಹೂವು ಮಾವು ಚಿಗುರು
ಹೊಂಗೆಹೂವು ಮಾವು ಚಿಗುರಿದೆ
ನಾಜೂಕಿನಲಿ ಪ್ರಕೃತಿಯು ಚೆಲುವನ್ನು ಹರವಿದೆ
ಲಜ್ಜೆಯ ವಧುವಿನಂತೆ
ನೋಡಿರಿ ಮನ್ಮಥನ ಗೆಳೆಯನನು
ಹೂಡಿ ನಿಂತಿಹನು ಹೂಬಾಣವನು
ಕಾಮನೆಗಳ ಕೋಡಿ ಹರಿಯಲು
ಕಾಣಿರಿ ಮದನೋತ್ಸವದ ಲವಲವಿಕೆಯನು
ಎಣ್ಣೆಯ ಜಳಕಮಾಡಿ ಹೊಸದಿರಿಸು ಧರಿಸುವರು
ದೇವ ದೇವಿಯರ ನಮಿಸುವರು
ಸಂತಸ ಸಿಂಚನ ಸಂಚಾರದಲಿ
ಭಕ್ಷ-ಭೋಜನಗಳ ಹಂಚಿ ಸಂಭ್ರಮಿಸುವರು
ಹಬ್ಬಹರಿದಿನಗಳ ಆರಂಭವು
ಜಾತ್ರೆಗಳ ಅನುರಣನವು
ನವ ಯೋಚನೆ ಯೋಜನೆಗಳಿಗೆ ಸಕಾಲವು
ಆರಂಬಗಾರನಿಗೆ ಗದ್ದೆಗಿಳಿಯುವ ತವಕವು
ಬೇವು-ಬೆಲ್ಲಧ್ಯೋತಕ ಜೀವನ
ಸಾಗರಯಾನದಲಿ ಸಿಹಿಕಹಿಗಳನುಕ್ರಮಣಿಕೆ
ಹೊಸವರುಷದ ರಾಗರಸ ಮಾಮರದಲಿದೆ
ಕೋಗಿಲೆ ಹಾಡಿದೆ ವಂದನೆ ವಸಂತಮಾಸಕೆ
ಸೋಮವಾರ, ಏಪ್ರಿಲ್ 16, 2012
ಬದುಕು-ಗರಿಕೆ
ಬದುಕು ಹುಲ್ಲಂತೆ ಗರಿಕೆ ಹುಲ್ಲಂತೆ
ನೀರ ಒಸರಿನ ಹಿಡಿದು ವಾಸನೆ
ಬೆಳೆಯಿತು ಕಂಡಲ್ಲಿ ಬಂಡೆಯೆಡೆಯಲ್ಲಿ
ಹೆಂಚ ಮಾಡಲ್ಲಿ, ಸಂದುಗೊಂದಲ್ಲಿ
ಅವಕಾಶವಿರುವಲೆ ಬಿಟ್ಟು ಕೊರಗಬೇಡ
ವಿಶಾಲ ಪ್ರಪಂಚದಲನಂತ ಅವಕಾಶ
ನೆಲೆನಿಲ್ಲು ತಳವೂರು ಸಿಕ್ಕಲ್ಲಿ
ಭರವಸೆಯಿರಲಿ ಚಿರಂಜೀವಿಯಲ್ಲ ನೀನಿಲ್ಲಿ
ಭೀಕರ ಬರದಂತೆ ಬಿಸಿಲ ಝಳಪು
ಪಸೆ ಆವಿಯಂತೆ ಮುಗಿಲೇರಿತು
ಆಶಿಸಿ ಮಳೆಯ ತಿರುಗಿ ಚಿಗುರಲು
ಕಷ್ಟಕೋಟಲೆಗಳು ಕಾಲನಿಯಮಗಳು
ಸಾಮಂಜಸ್ಯ ಬದುಕಿನ ಮೂಲನಿರ್ಣಯಗಳು
ನಿರಂತರವಲ್ಲ ಇರುಳು ದುಡುಕದಿರು ಸ್ವಲ್ಪತಾಳು
ಅಳಿವುಉಳಿವಿನಂಚಿನಲ್ಲಿ ಕೊಂಚಕಾಯು
ಹಿಂದಿರುವರ ಮುಂಬಲವಾಗು ಮುಂದಡಿಯಿಡಲು
ನೆರವಾಗು, ನಿನಗೂ ಪರರಿಗೂ ಉದಾರಿಯಾಗು
ಸೀಮೆ ಮೀರಿದ ಬಾನಿಗೆ ತೆರದ ಗರಿಕೆ
ಮೇವು ನೀಡಿತು ಜೀವಜಗಕೆ
ಗುರುವಾರ, ನವೆಂಬರ್ 17, 2011
ಕಾಡು ಚಿರತೆ ನಾಡಿಗೆ ಬಂದಿತ್ತಾ
ಕಾಡು ಚಿರತೆ ನಾಡಿಗೆ ಬಂದಿತ್ತಾ
ಕುರಿಕುನ್ನಿಗಂಟಿಯ ನುಂಗಿತ್ತಾ
ಊರ ಸೇರೋ ಕಾಡುದಾರಿ
ನಡುಮದ್ಯ ಹಾದಿಯಲ್ಲಿ
ಶಬ್ದ ಕೇಳದ ನೀರವದಲ್ಲಿ
ನೆತ್ತಿ ಮೇಲೆ ಸೂರ್ಯ ಹತ್ತಿ
ಧರೆಗೆ ನೆರಳ ಜಡೆಯ ಸುತ್ತಿ
ನಿಂತ ವನದ ಗೆಲ್ಲಿನಿಂದ
ಬೇಟೆಗಾಗಿ ಹೊಂಚು ಹಾಕಿತ್ತಾ (ಪಲ್ಲವಿ)
ಬೆಂಕಿಕೆಂಡ ಹೊತ್ತ ಮೈಯ
ಉದ್ದಕ್ಕುದ್ದ ಬಾಗಿದ ಬಾಲ
ಸಣ್ಣ ಕಿವಿನೇರ ಕಣ್ಣ
ಕೋಲ್ಮಿಂಚಲೆ ಹೂಡಿ ಸಂಚ
ನೀಟು ಮೀಸೆ ಗಲ್ಲಸೆಟೆದು
ಚೂಪು ಈಟಿ ದವಡೆ ಮಿರಿದು
ಕೊಕ್ಕೆ ನಖದಿ ಟೊಂಗೆ ಕೆರೆದು
ಕವಣೆ ಕಲ್ಲು ಬಿಟ್ಟ ಹಾಂಗ
ತಪ್ಪದ ಗುರಿ ಹೊಂಚಿನ ಮೇಲೆಗರಿತ್ತಾ (೧)
ಪುಷ್ಟಕಾಲು ಸ್ಪಷ್ಟಓಟ
ದಷ್ಟಬಲಿಷ್ಠ ಖಂಡಮಾಂಸ
ಹೊತ್ತು ಇಳಿದು ಗ್ರಾಮ ತಲುಪಿ
ಹಟ್ಟಿಹೊಕ್ಕು ಪ್ರಾಣ ಕೆಡವಿ
ಬಡ ಬದುಕ ರಕ್ತಹೀರಿ
ಮುದದಿ ಕುಣಿದು ಸೊಕ್ಕೇರಿ
ಹೋಗ್ವೆನೆಂದು ನೆನೆದು ತಿರುಗಿ
ಏರಿಹಾರಿ ದಾರಿ ಮರೆತು
ಕಾಲು ಜಾರಿ ಖಾಲಿ ಬಾವಿಗೆ ಬಿದ್ದಿತ್ತಾ (೨)
ಜಾತ್ರೆ ನೆರೆದ ಬಾವಿಹತ್ರ
ದಿಗಿಲೇರಿದ ಕೂಗಾಟ
ನೂರು ನೇತ್ರ ತಿವಿದ ನೋಟ
ಕೈಯ ಬೆರಳ ಸಂಜ್ಞೆಯಾಟ
ಕಂಡಿತ್ತ ಗಲಿಬಿಲಿಗೊಂಡಿತ್ತ
ಬಲೆ ಇಳಿಸಿ ಮೇಲಕ್ಕೆತ್ತಿ
ಬಂಧಿಮಾಡೋ ಮಂದಿಗ್ಹೆದರಿ
ಬರಿದುಮಾಡಿ ಛಂಗನೆಗೆದು
ಓಟಕ್ಕಿತ್ತ ಕಾಡೊಳು ಮರೆಯಾಗಿತ್ತಾ (೩)
ಶನಿವಾರ, ಅಕ್ಟೋಬರ್ 29, 2011
ಹಣತೆ ನೀನಾಗಿರಲು
ಹಣತೆ ನೀನಾಗಿರಲು
ಅರಳೆ ನಾನಾಗುವೆ
ಉರಿಬೆಂಕಿಯಲುರಿದು
ಲೋಕ ಬೆಳಗುವೆ
ಮರವು ನೀನಾಗಿರಲು
ನೆರಳು ನಾನಾಗುವೆ
ದಣಿದು ಬಳಿದುದಕೆ
ದಣಿದು ಬಳಿದುದಕೆ
ತಂಪು ನೀಡುವೆ
ನದಿ ನೀನಾಗಿರಲು
ಪ್ರವಾಹ ನಾನಾಗುವೆ
ಹಾದಿ ಕೊರೆಯುತಾ
ಗುರಿ ಸೇರುವೆ
ಮೋಡ ನೀನಾಗಲು
ಮಳೆ ನಾನಾಗುವೆ
ಧರೆಯ ಒಡಲಿಗೆ
ವೃಷ್ಟಿ ಹರಿಸುವೆ
ಕಿನ್ನರಿ ನೀನಾಗಲು
ನಾದ ನಾನಾಗುವೆ
ಭಾವ ಜೀವನ
ಗೀತೆ ಹಾಡುವೆ
ಗೀತೆ ಹಾಡುವೆ
ಸಮಯ ನೀನಾಗಿರಲು
ಕ್ಷಣ ನಾನಾಗುವೆ
ಕ್ಷಣ-ಕ್ಷಣ ಕಲೆತು
ಕಾಲಾನಂತ ತಲುಪುವೆ
ದೇಹ ನೀನಾಗಿರಲು
ಆತ್ಮ ನಾನಾಗುವೆ
ಆತ್ಮ ಬೆಳಗಿ
ಜ್ಞಾನ ನೀಡುವೆ
ಚೆಲುವು ನೀನಾಗಿರಲು
ಹರೆಯ ನಾನಾಗುವೆ
ಸೃಷ್ಟಿ ಸಂಪೂರ್ಣ
ಎರಡೂ ಮೇಳೈಸಿದಾಗಲೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Whispers of Stolen Identities
In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...
-
ಕಳೆದ್ಹೋಗಿದೆ ವಿಳಾಸ ನಾನ್ಯಾರೆಂದು ಮರೆತು ಹೋಗಿದೆ ನೋಟದಲಿ ಮೊದಲಸಲ ಕಲೆತಾಗ ನೋಟ... ಜುಮ್ಮಾಯಿತು ನನ್ನಭಿಮಾನವನು ಮಣ್ಣು ಮಾಡಿ ಸಾಲದೆ ಪರಿಚಯವನು ಕದ್ದು ಹೋದೆ ...
-
In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...
-
ಪಡುವಣದ ಶಿಖರ ಶೃಂಖಲೆಯೊಳು ಆಗಂಬೆಯ ಮೇರು ತಾಣವದು ನರಹರಿ ಮಡಿಲಿನ ಶಿಶುವೊಂದು ಅಂಕುಡೊಂಕಿನ ದೂರ ಸವೆಸಿ ಬೆಳೆದಳು ಅವಳೇ ನಲ್ಮೆಯ ಸೀತಾ... ಧುಂಮ್ಮೆಂದು ಧುಮುಕಿ ಕಲ್ಲು ಬ...